14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಸುಯೋಗ...

ಅದು ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಪ್ರಥಮ ಬಿಬಿಎಂ ಪದವಿಯ ಆರಂಭದ ದಿನಗಳು. ಸರಿಯಾಗಿ 11 ವರ್ಷಗಳ ಹಿಂದಿನ ಸವಿನೆನಪು. ಕಥೆ, ಕವನ, ಪತ್ರಿಕೆ ಬರಹ ಎಂದೆಲ್ಲಾ ನಮ್ಮದೇ ಬಳಗದೊಂದಿಗೆ ಸಕ್ರಿಯವಾಗಿದ್ದಾಗ ಇದೊಂದು ಅವಕಾಶವೂ ಇದಿರಾಗಿತ್ತು. ಮಿತ್ರ ಮಂಡಳಿ ಕೋಟ, ಶ್ರೀ ಕಾಲೇಜು ಮೂಡುಬಿದಿರೆ ಆಯೋಜಿಸುತ್ತಾ ಬಂದಿದ್ದ 14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಸುಯೋಗವದು. 2009ರ ಅಕ್ಟೋಬರ್ 10ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಜರುಗಿದ ಆ ಕಾರ್ಯಕ್ರಮ ಬದುಕಿನ ಬಹುದೊಡ್ಡ ಮಜಲು ಎಂಬುದು ನನ್ನ ಭಾವನೆ.

ಆಗೆಲ್ಲಾ ವೇದಿಕೆ, ಮಾತು ನನಗಂತೂ ಹೊಸತು. ಭಯವಿತ್ತು. ತೀರಾ ಮುಜುಗರ ಪಡುತ್ತಿದ್ದೆ. ಅಂತಹದ್ದೊಂದು ಕಾರ್ಯಕ್ರಮದ ಬಗ್ಗೆ ನನ್ನ ಮನೆಯವರಿಗೆ ತಿಳಿಸಿರಲಿಲ್ಲ. ಅಂದಿನ ಉದ್ಘಾಟನಾ ಸಮಾರಂಭ, ಕವಿಗೋಷ್ಠಿ, ಕಥಾಗೋಷ್ಠಿ, ವಿಚಾರಗೋಷ್ಠಿ, ಸಮಾರೋಪ ಹೀಗೆ ಎಲ್ಲಡೆಯೂ ಹಲವು ಗಣ್ಯರನ್ನೂ, ನಾನು ಗೌರವಿಸುತ್ತಿದ್ದ ಬರಹಗಾರರನ್ನು, ಪ್ರತಿಭಾನ್ವಿತರನ್ನು ಭೇಟಿಯಾಗುವ ಅವಕಾಶ ದೊರೆತದ್ದು ಇಂದಿಗೂ ಖುಷಿಯ ಸಂಗತಿಗಳಲ್ಲೊಂದು.

ಇಂತಹದ್ದೊಂದು ಸಂದರ್ಭದ ನಿರೀಕ್ಷೆ ಇದ್ದಿರಲಿಲ್ಲ. ಅವಕಾಶ ಒದಗಿಸಿಕೊಟ್ಟ ಕೋಟ ಉಪೇಂದ್ರ ಸೋಮಯಾಜಿ ಅವರಿಗೂ, ಗುರು ಸಮಾನರೇ ಆದ ಶೇಖರ ಅಜೆಕಾರು ಅವರಿಗೂ ಹಾಗೂ ಮೂಡುಬಿದಿರೆಯ ಎಲ್ಲಾ ಸಹೃದಯಿಗಳಿಗೂ ಕೃತಜ್ಞತೆಗಳು.

ನನಗೆ ಇಂದಿಗೂ ಮೂಡುಬಿದಿರೆ ಎಂದೊಡನೆ ಒಂದು ಆಪ್ತಭಾವ ಆವರಿಸಿಕೊಳ್ಳುತ್ತವೆ. ಅಲ್ಲಿ ಈ ಸಮ್ಮೇಳನ ನಡೆದಿತ್ತು ಎಂಬ ಕಾರಣಕ್ಕೆ ಎಂಬುದನ್ನು ಅಲ್ಲಗಳೆಯಲಾರೆ. ಹೆಚ್ಚಾಗಿ ಅದು ಇಂದಿಗೂ ನೆನಪಿರಬಹುದಾದ ಸ್ನೇಹಿತರನ್ನು, ಹಿತೈಶಿಗಳನ್ನು, ಮೋಹನ ಆಳ್ವರೆಂಬ ಬೆರಗನ್ನು, ಶೇಖರ ಅಜೆಕಾರು ಎಂಬ ಕ್ರೀಯಾಶೀಲರನ್ನು ಪರಿಚಯಿಸಿದ ಊರು ಎಂಬ ಕಾರಣಕ್ಕೆ ಹಾಗಿರಬಹುದು.




































0 comments:

Post a Comment

 
Design by KMN