ಸುನಿಲ್ ಬೈಂದೂರು ಗೆ 'ಗ್ರಾಮೋತ್ಸವ ಯುವ ಗೌರವ' ಪ್ರಶಸ್ತಿ

ಕುಂದಾಪುರ: ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ಕುರ್ಪಾಡಿಯಲ್ಲಿ ಇತ್ತೀಚೆಗೆ ಜರುಗಿದ ೧೩ನೇ ವರ್ಷದ ಆದಿ ಗ್ರಾಮೋತ್ಸವದಲ್ಲಿ ಯುವ ಪತ್ರಕರ್ತ ಸುನಿಲ್ ಹೆಚ್. ಜಿ. ಬೈಂದೂರು ಅವರ ಸಾಹಿತ್ಯ ಹಾಗೂ ವೆಬ್ ಪತ್ರಿಕೋದ್ಯಮದಲ್ಲಿನ ಸಾಧನೆಯನ್ನು ಗುರುತಿಸಿ `ಗ್ರಾಮೋತ್ಸವ ಯುವ ಗೌರವ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ನಟ ನಿರ್ದೇಶಕ ಪ್ರಕಾಶ್ ಕಾಬೆಟ್ಟು, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಜ್ಯೋತಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಾಧನಾ, ಕರ್ನಾಟಕ ಮುಸ್ಲಿಂ ಜಮಾತ್ ಕೌಸಿಲ್ ನ ಪ್ರಧಾನ ಕಾರ್ಯದರ್ಶಿ ಅಬುಸುಪಿಯಾನ್ ಮದನಿ, ಉ.ಜಿ.ಪಂ ಮಾಜಿ ಉಪಾಧ್ಯಕ್ಷ ಡಾ.ಸಂತೋಷಕುಮಾರ್ ಶೆಟ್ಟಿ, ಜಾದೂಗಾರ ಪ್ರೊ. ಶಂಕರ್, ನಟಿ ರಕ್ಷಾ ಕಾರ್ಕಳ, ಆದಿಗ್ರಾಮೋತ್ಸವ ಗೌರವ ವಿಜೇತ ವಿಜಯನಾಥ ವಿಠಲ ಶೆಟ್ಟಿ, ಸಂಘಟಕ ಶೇಖರ ಅಜೆಕಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

1 comments:

Anonymous said...

Congrats sunil

Post a Comment

 
Design by KMN