ದೆಹಲಿ ಕರ್ನಾಟಕ ಸಂಘಕ್ಕೆ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಾಂಸ್ಥಿಕ ಸಾಧನ ಗೌರವ

ಕುಂದಾಪುರ: ೫ನೇ ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನದ `ಸಾಂಸ್ಥಿಕ ಸಾಧನ ಗೌರವ'ಕ್ಕೆ ಆಯ್ಕೆಯಾದ ದೆಹಲಿ ಕರ್ನಾಟಕ ಸಂಘಕ್ಕೆ ಪ್ರಶಸ್ತಿಯನ್ನು ಇತ್ತಿಚಿಗೆ ದೆಹಲಿಯಲ್ಲಿ ಪ್ರದಾನ ಮಾಡಲಾಯಿತು. ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶೇಖರ ಅಜೆಕಾರು, ಸಹ ಕಾರ್ಯದರ್ಶಿ, ಕುಂದಾಪ್ರ ಡಾಟ್ ಕಾಂ ನ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಪ್ರಶಸ್ತಿಯನ್ನು ಹಸ್ತಾಂತರಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿ ಸಿ. ಎಂ. ನಾಗರಾಜ್ ಪ್ರಶಸ್ತಿಯನ್ನು ಸ್ವೀಕರಿಸಿದರು. 

ಉಡುಪಿ ಪ್ರೆಸ್ ಪೋಟೋಗ್ರಾಫರ್ ಸ್ ಅಸೋಸಿಯೇಶನ್ ನ ಉಪಾಧ್ಯಕ್ಷ ಜನಾರ್ಧನ ಕೊಡವೂರು, ರೋಟರಿ ಮಲ್ಪೆ ಕೊಡವೂರು ಅಧ್ಯಕ್ಷೆ ಪೂರ್ಣಿಮಾ ಜನಾರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧಿಕಾರಿ ನಾಗರಾಜಯ್ಯ, ನರೇಂದ್ರ ರೈ, ಪ್ರಜ್ಞಾ ಕೊಡವೂರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

0 comments:

Post a Comment

 
Design by KMN